    ಮೂಲದೊಡನೆ ಪರಿಶೀಲಿಸಿ

ಎಥಿಲೀನ್ -
	ಆಲ್ಕೀನ್ ವರ್ಗಕ್ಕೆ ಸೇರಿದ ಆಲಿಫ್ಯಾಟಿಕ್ ಹೈಡ್ರೋಕಾರ್ಬನ್, ರಾಸಾಯನಿಕಸೂತ್ರ C2H4. ಇದು ಅಪರ್ಯಾಪ್ತ ಸಂಯುಕ್ತವಾದ್ದರಿಂದ ಇದರಲ್ಲಿ ಎರಡು ಇಂಗಾಲದ ಪರಮಾಣುಗಳು ಸಿಗ್ಮ () ಮತ್ತು ಪೈ () ಬಂಧಗಳ ಮೂಲಕ ಸೇರಿಸಲ್ಪಟ್ಟಿವೆ (ದ್ವಿಬಂಧಗಳು-ಡಬಲ್ ಬಾಂಡ್ಸ್).  ಎಥಿಲೀನ್ ರಚನೆಯನ್ನು ಮೂರು ಮಾದರಿಯಲ್ಲಿ ತೋರಿಸುವ ವಾಡಿಕೆಯಿದೆ.  ಬಂಧ  ಬಂಧಕ್ಕಿಂತ ದುರ್ಬಲವಾಗಿರುವುದರಿಂದ ಸುಲಭವಾಗಿ ಭೇದಿಸಲ್ಪಡುತ್ತದೆ.  ಈ ಗುಣದಿಂದ ಎಥಿಲೀನ್ ಅಣುವಿನ ದ್ವಿಬಂಧಕ್ಕೆ ಕ್ಲೋರಿನ್, ಬ್ರೋಮಿನ್ ಹೈಡ್ರೊಜನ್ ಕ್ಲೋರೈಡ್, ಆಕ್ಸಿಜನ್ನುಗಳನ್ನು ಸೇರಿಸಬಹುದು. 
	ಈ ಕ್ರಿಯೆಗಳಿಂದ ಎಥಿಲೀನ್ ಪರ್ಯಾಪ್ತ ಅಣುವಾಗಿ ಪರಿವರ್ತನೆಗೊಳ್ಳುತ್ತದೆ. 
ಚಿತ್ರ-1

ಚಿತ್ರ: 1 ಚೆಂಡು ಮತ್ತು ಕಡ್ಡಿಗಳ ಮಾದರಿ
ಚಿತ:್ರ 2  ಮತ್ತು  ಬಂಧನಗಳ ಮಾದರಿ 
ಚಿತ್ರ: 3 ಸ್ಟೂವರ್ಟಿನ ಮಾದರಿ 

ಮೂಲಗಳು : 	ಪೆಟ್ರೋಲಿಯಂ ಮತ್ತು ನಿಸರ್ಗ ಅನಿಲದಲ್ಲಿ (ನ್ಯಾಚುರಲ್ ಗ್ಯಾಸ್) ಹಾಗೂ ನ್ಯಾಫ್ಥಾದಲ್ಲಿ ಎಥಿಲೀನ್ ದೊರೆಯುತ್ತದೆ.  ಮೋಟಾರ್ ವಾಹನಗಳು ಉಗುಳುವ ಹೊಗೆಯಲ್ಲಿಯೂ ಅಲ್ಪ ಪ್ರಮಾಣದಲ್ಲಿ ಇದೆಯೆಂದು ಪತ್ತೆಮಾಡಲಾಗಿದೆ. 

ತಯಾರಿಕೆ : 	ಪೆಟ್ರೋಲಿಯಂ ಮತ್ತು ನಿಸರ್ಗಾನಿಲಗಳನ್ನು ಅಧಿಕ ಉಷ್ಣತೆಯಲ್ಲಿ ಕಾಯಿಸಿದಾಗ (ಉತ್ತಾಪ ವಿಚ್ಛೇದನೆ-ಪೈರೋಲಿಸಿಸ್ ಕ್ರ್ಯಾಕಿಂಗ್) ಎಥಿಲೀನ್ ಉತ್ಪತ್ತಿಯಾಗುತ್ತದೆ.  ಕಚ್ಚಾ ಪೆಟ್ರೋಲಿಯಂ ಎಣ್ಣೆಯ ಶುದ್ಧೀಕರಣದಲ್ಲಿ ಹೊರಬರುವ ಅನಿಲಗಳಲ್ಲಿ ಎಥಿಲೀನ್ ಹೆಚ್ಚಿನ ಪ್ರಮಾಣದಲ್ಲಿರುವುದು.  ಔದ್ಯೋಗಿಕವಾಗಿ ಎಥಿಲೀನನ್ನು ಮೇಲೆ ಹೇಳಿದ ಅನಿಲಗಳಿಂದ ಆಸವನ (ಡಿಸ್ಟಿಲ್ಲೇಷನ್) ಮತ್ತು ಅಧಿಶೋಷಣ ( ಅಡ್‍ಸಾಪ್ರ್ಷನ್) ವಿಧಾನಗಳಿಂದ ಪಡೆಯುತ್ತಾರೆ.  ಪ್ರೋಪೈಲಿನ್ ಮತ್ತು ಬ್ಯೂಟಾಡಯೀನ್ ಅನಿಲಗಳನ್ನೊಳಗೊಂಡು ಅಶುದ್ಧವಾಗಿದ್ದರೂ ಈ ವಿಧಾನಗಳಿಂದ ಬರುವ ಎಥಿಲೀನನ್ನು ನೇರವಾಗಿ ಅನೇಕ ರಾಸಾಯನಿಕ ಕ್ರಿಯೆಗಳಿಗೆ ಉಪಯೋಗಿಸುತ್ತಾರೆ.  ಶುದ್ಧವಾದ ಎಥಿಲೀನನ್ನು ಅಲ್ಪಪ್ರಮಾಣದಲ್ಲಿ ಮದ್ಯಸಾರದ ಆವಿಯನ್ನು ಪಟುಗೊಳಿಸಿದ (ಆಕ್ಟಿವೇಟೆಡ್) ಅಲ್ಯುಮಿನ (ಅಲ್ಯೂಮಿನಿಯಂ ಆಕ್ಸೈಡ್) ಮೇಲೆ ಹಾಯಿಸಿ ಪಡೆಯಬಹುದು. 

ಭೌತಗುಣಗಳು :  	ಬಣ್ಣವಿಲ್ಲದ ಅನಿಲ, ವಿಶಿಷ್ಟವಾದ ಸುವಾಸನೆ ಮತ್ತು ರುಚಿಯುಳ್ಳದ್ದು.  3% ಪ್ರಮಾಣದ ಗಾಳಿಯೊಂದಿಗೆ ಸೇರಿದರೆ ಸ್ಫೋಟಕ ಮಿಶ್ರಣವುಂಟಾಗುತ್ತದೆ.  ಕರಗುವ ಉಷ್ಣತೆ- 169ಲಿ ಸೆಂ.ಗ್ರೇ. ಆವಿಯಾಗುವ ಉಷ್ಣತೆ- 1025ಲಿ ಸೆಂ.ಗ್ರೇ. ಸಾಪೇಕ್ಷ ಸಾಂದ್ರತೆ 0ಲಿ ಸೆಂಟಿಗ್ರೇಡಿನಲ್ಲಿ 0. 610.  ಆವಿಯ ಸಾಂದ್ರತೆ (0ಲಿ ಸೆಂ. ಗ್ರೇ.  ಮತ್ತು 760 ಮಿ.ಮಿ. ಒತ್ತಡದಲ್ಲಿ ಗಾಳಿ=1) 0. 975. ದ್ರವಿಸುವ ಅವಧಿಕ ಉಷ್ಣತೆ (ಕ್ರಿಟಿಕಲ್ ಟೆಂಪರೇಚರ್) 9.5ಲಿ. ಸೆಂಗ್ರೇ. 
ರಾಸಾಯನಿಕ ಗುಣಗಳು :  	1 ಎಥಿಲೀನ್ ಅಪರ್ಯಾಪ್ತ ಸಂಯುಕ್ತವಾದದ್ದರಿಂದ ಕೂಡಿಕೆ ಕ್ರಿಯೆಗಳನ್ನು ಹೊಂದುತ್ತದೆ.  ಇದು ಅಪಕರ್ಷಕಾರಿಯಂತೆಯೂ ವರ್ತಿಸುತ್ತದೆ. 
		
		        ಪ್ಲಾಟಿನಂ
		
                              ವೇಗವರ್ಧಕ
	2 ಎರಡು ಹೈಡ್ರಾಕ್ಸಿಲ್ ಗುಂಪುಗಳನ್ನು ಸೇರಿಸಿ ಗ್ಲೈಕಾಲನ್ನು ರಚನೆ ಮಾಡಬಹುದು. 
	3 ಎಥಿಲೀನನ್ನು ಒತ್ತಡದಲ್ಲಿ ಆಕ್ಸಿಜನ್ನನೊಂದಿಗೆ ಕಾಯಿಸಿದಾಗ ಪಾಲಿ ಎಥಿಲೀನ್ ದೊರಕುತ್ತದೆ.  ಇದರ ಅಣುತೂಕ ಸುಮಾರು 20,000 ಈ ಸಂಯುಕ್ತದಲ್ಲಿ ಅನೇಕ ಎಥಿಲೀನ್ ಅಣುಗಳು ಒಂದಕ್ಕೊಂದು ಸೇರಿ ಉದ್ದವಾದ ಸರಪಳಿಯನ್ನು ರಚಿಸುತ್ತವೆ.              

          ಆಕ್ಸಿಜನ್ ಒತ್ತಡ

nCH2=CH2	~CH2-(CH2-CH2-CH2n)-CH2

             ಉಷ್ಣ

ಉಪಯೋಗಗಳು :  1. ಎಥಿಲೀನನ್ನು ಮೂಲವಸ್ತುವನ್ನಾಗಿ ಉಪಯೋಗಿಸಿ ಟನ್ನುಗಟ್ಟಲೆ ಎಥಿಲೀನ್ ಡೈಕ್ಲೋರೈಡ್, ಪಾಲಿ ಎಥಿಲೀನ್, ಸ್ಟೈರೀನ್, ಎಥಿಲೀನ್ ಡೈಆಕ್ಸೈಡ್, ಅಸಿಟೈಲುಗಳು,  ಇP ರಬ್ಬರು, ಈಥೈಲ್ ಆಲ್ಕೊಹಾಲ್ ಮತ್ತು ಇತರ ನೀಳವಾದ ರಚನೆಯುಳ್ಳ ಆಲ್ಕೊಹಾಲುಗಳನ್ನು ತಯಾರಿಸುತ್ತಾರೆ. 

	2 ಹಣ್ಣುಗಳಿಗೆ ಬಣ್ಣವನ್ನು ಕೊಡಲು ಮೊಳಕೆ ಮತ್ತು ತರಕಾರಿ ಮತ್ತು ಹಣ್ಣಿನ ಗಿಡಗಳ ಬೆಳವಣಿಗೆಯನ್ನು ತ್ವರಿತಗೊಳಿಸಲು ಹಣ್ಣಿನ ಮಾಗಾಣಿಕೆಯನ್ನು ತ್ವರಿತಗೊಳಿಸಲು ಎಥಿಲೀನಿನ ಉಪಯೋಗವಿದೆ.  (ಎಥಿಲೀನ್ ಮತ್ತು ಆಕ್ಸಿಜನ್ನಿನ ಮಿಶ್ರಣದ ಜ್ವಾಲೆಯನ್ನು ಬೆಸುಗೆ ಹಾಕಲು ಮತ್ತು ಲೋಹವನ್ನು ಕತ್ತರಿಸಲು ಉಪಯೋಗಿಸುತ್ತಾರೆ.  
(ಎಚ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ